Haravu Spoorthy Gowda - Bangalore Literature Festival (BLF)

Bio

ಸ್ಫೂರ್ತಿಗೌಡ ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ ಹರವು ಗ್ರಾಮದವರು. ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಬುಡಕಟ್ಟು (ಮಲೆಕುಡಿಯ) ಜನಾಂಗದ ಮೇಲೆ ಟಿವಿ ಪರಿಣಾಮ’ ಎಂಬ ವಿಷಯದ ಮೇಲೆ ಸಂಶೋಧನೆ ಮಾಡಿದ್ದಾರೆ. ‘ಕಬ್ಬು’, ‘ಕೋಳಿ ಅಂಕ’ ಸಾಕ್ಷಿಚಿತ್ರ ನಿರ್ಮಿಸಿದ್ದಾರೆ. ಕನ್ನಡ ಪ್ರಭ, ಪ್ರಜಾ ಟಿವಿ, ಜನಶ್ರೀ ಸುದ್ದಿವಾಹಿನಿ ಕೆಲಸ ಮಾಡಿ. ಬಿಗ್ ಬಾಸ್ ಹಾಗೂ ಸೂಪರ್ ಮಿನಿಟ್ ರಿಯಾಲಿಟಿ ಶೋನಲ್ಲಿ ಎಪಿಸೋಡ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಸಧ್ಯ ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿದ್ದಾರೆ. 2014ರಲ್ಲಿ ಇವರ ‘ಹುಣಸೆ ಹೂ’ ಮೊದಲ ಕವನ ಸಂಕಲವನ್ನು ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. 2018ರಲ್ಲಿ ‘ಋಣ’ ಕವನ ಸಂಕಲನ ಪ್ರಕಟಗೊಂಡಿದೆ.