“ಇಂಡಿಯಾ ಆಫ್ಟರ್ ಗಾಂಧಿ” ಯ ಲೇಖಕರಾದ ರಾಮಚಂದ್ರ ಗುಹಾರವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ 8 ಆಪತ್ತುಗಳ ಬಗ್ಗೆ ಮಾತನಾಡಿದರು.
ನಮಗೆ ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಪ್ರಶ್ನಿಸುವ ಸ್ವಾತಂತ್ರವಾದರೂ ಇದೆಯೇ? ಭಾರತದಲ್ಲಿ ಪ್ರಜಾ ತಾಂತ್ರಿಕತೆ ಎಷ್ಟರ ಮಟ್ಟಿಗಿದೆ? ಕಳೆದ ದಶಕದ ಅವರ ಅಭಿಪ್ರಾಯದಂತೆ ಭಾರತದಲ್ಲಿ 50-50 ರಷ್ಟು ಪ್ರಜಾಪ್ರಭುತ್ವ ಇತ್ತು. ಪ್ರಜಾ ಪ್ರಭುತ್ವವನ್ನು ಪೋಷಿಸುವ ಮತ್ತು ಅದನ್ನು ದುರ್ಬಲಗೊಳಿಸುವ ಸಂಸ್ಥೆಗಳ ಸಮತೋಲನವಿತ್ತು. ಆದರೆ ಇಂದು 40-60 ರಷ್ಟು ಪ್ರಜಾಪ್ರಭುತ್ವ ಕಾಣುತ್ತಿದ್ದೇವೆ.
ರಾಮಚಂದ್ರ ಗುಹಾರ ಅಭಿಪ್ರಾಯದಂತೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ 8 ಆಪತ್ತುಗಳೆಂದರೆ,
- ಹಳೆಯ ಕಾನೂನುಗಳು – ಅಭಿವ್ಯಕ್ತಿ ಸ್ವತಂತ್ರಕ್ಕೆ ಸಂಬಂಧಪಟ್ಟ ಕಾನೂನುಗಳು 1835 ರಲ್ಲಿ ವಸಾಹತು ಆಳ್ವಿಕೆಯ ಕಾಲದಲ್ಲಿ ರೂಪುಗೊಂಡಂತವು. ಅಂದಿನಿಂದ ಕೆಲವು ತಿದ್ದುಪಡಿಗಳಷ್ಟೇ ಆಗಿರುವುದರಿಂದ ಕಾನೂನುಗಳು ಅಷ್ಟು ಸಮರ್ಥವಾಗಿಲ್ಲ.
- ನ್ಯಾಯಾಂಗ ವ್ಯವಸ್ಥೆಯಲ್ಲಿನ ದೋಷ – ಸಿನೆಮ ಮತ್ತ ಪುಸ್ತಕಗಳಿಗೆ ತಡೆಯಾಜ್ಞೆ ತಂದಾಗ ಅದರ ಮೇಲಿರುವ ದುಡ್ಡಿನ ಒತ್ತಡಕ್ಕೋ, ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬದಿಂದಲೋ ಹೆದರಿ ರಾಜಿಯಾಗಬೇಕಾದ ಪರಿಸ್ಥಿತಿ ಇರುತ್ತದೆ.
- ಗುರುತಿನ ರಾಜಕೀಯ – ಸುಭಾಷ್ ಚಂದ್ರ ಬೋಸ್ ಬಗ್ಗೆ ಬರೆದರೆ ಬಂಗಾಳಿಗಳು, ಶಿವಾಜಿ ಬಗ್ಗೆ ಬರೆದರೆ ಮರಾಠಿಯವರು, ಪೆರಿಯಾರ್ ಗೆ ತಮಿಳರು, ಅಂಬೇಡ್ಕರ್ ಗೆ ದಲಿತರು ಹೀಗೆ ದೊಡ್ಡ ವ್ಯಕ್ತಿಗಳ ಬಗ್ಗೆ ಅವರ ಸೋಲು, ತಪ್ಪುಗಳ ಕುರಿತು ಬರೆದಾಗ ಅದರ ವಿರುದ್ಧ ನಿಲ್ಲುತ್ತಾರೆ. ಗಂಧಿಯೋಬ್ಬರ ಬಗ್ಗೆ ಈ ದೇಶದಲ್ಲಿ ಯಾರು ಏನನ್ನಾದರೂ ಬರೆಯಬಹುದು.
- ಪೊಲೀಸರ ನಡವಳಿಕೆ – ಶಿವಾಜಿಯ ಬಗ್ಗೆ ವಿವಾದಾತ್ಮಕವಾಗಿ ಬರೆದ ಪುಸ್ತಕಕ್ಕೆ ಕೆಲವರು ಕೇಸ್ ಹಾಕಿದಾಗ ನಿಷೇಧಕ್ಕೆ ಒಳಗಾಗಿ ನಂತರ ನಿಷೇಧ ತೆರವುಗೊಳಿಸಿದರು. ಆದರೆ ಆ ಗುಂಪಿನಿಂದ ಲೇಖಕರಿಗೆ ಅಪಾಯವಿದ್ದರೂ ಪೊಲೀಸಿನವರು ಯಾವುದೇ ರಕ್ಷಣೆ ನೀಡಲಿಲ್ಲ.
- ಯಾವುದೇ ದೊಡ್ಡ ಅಥವಾ ಚಿಕ್ಕ ರಾಜಕಾರಣಿಗಳೂ ಭಾರತೀಯ ಬರಹಗಾರರು/ಕಲಾವಿದರ ಸ್ವಾತಂತ್ರದ ಹಕ್ಕಿಗೆ ನಿಂತಿಲ್ಲ. ಸಲ್ಮಾನ್ ರಶ್ದಿಯವರ ಮೇಲೆ ಫತ್ವಾ ಹೊರಡುವ ಮುನ್ನವೇ ಅವರ ಸಟಾನಿಕ್ ವರ್ಸೆಸ್ ನಿಷೇದಕ್ಕೆ ಒಳಗಾಯಿತು.
- ಸರ್ಕಾರಿ ಜಾಹಿರಾತಿನ ಮೇಲೆ ಮಾಧ್ಯಮದ ಅವಲಂಬನೆ ಶುರುವಾದಾಗ ನೇರ, ನಿರ್ಭೀತ ಪತ್ರಿಕೋದ್ಯಮ ಅಸಾಧ್ಯ
- ವಾಣಿಜ್ಯ ಜಾಹಿರಾತಿನ ಮೇಲೆ ಮಾಧ್ಯಮಗಳ ಅವಲಂಬನೆಯಿಂದಾಗಿ ಕೂಡ ನ್ಯಾಯ, ನಿಷ್ಟುರವಾದ ಪತ್ರಿಕೋದ್ಯಮ ಅಸಾಧ್ಯ
- ಬರಹಗಾರರು ಎಲ್ಲಾ ರಾಜಕೀಯ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳಬೇಕು.
ಈ ವಿಷಯಗಳು ಭಾರತದ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡುತ್ತವೆ. ಚೀನಾ, ರಷ್ಯ ದೇಶಗಳಿಗಿಂತ ನಾವು ಉತ್ತಮ ವ್ಯವಸ್ಥೆಯಲ್ಲಿದ್ದರೂ, ಸ್ವೀಡನ್ ದೇಶದಂತಹ ವ್ಯವಸ್ಥೆಯೊಂದಬೇಕು