ಟಿಪ್ಪು ಸುಲ್ತಾನ್ ಮತ್ತು ಇತಿಹಾಸದ ಮರುರೂಪ – ದಿನೇಶ್ ಗುಂಡುರಾವ್, ಕೃಷ್ಣಮೂರ್ತಿ ಹನೂರು, ತೇಜಸ್ವಿ ಸೂರ್ಯ ಮತ್ತು ವಿಕ್ರಂ ಸಂಪತ್ ರೊಂದಿಗೆ ಮಾಯಾ ಮೀರ್ ಚಂದಾನಿ ಸಂವಾದ
ವಿಕ್ರಂ ಸಂಪತ್ ಮಾತನಾಡುತ್ತಾ “ ದೇಶ ಎಂಬ ಕಲ್ಪನೆಯೇ ಇರದಿದ್ದಾಗ ಒಬ್ಬ ರಾಜನಾಗಿ ತನ್ನ ಸಾಮ್ರಾಜ್ಯ ವಿಸ್ತಾರಕ್ಕಾಗಿ ಟಿಪ್ಪು ಹೊರಾಡಿದನೇ ಹೊರತು ಆತನನ್ನು ಸ್ವಾತಂತ್ರ ಹೋರಾಟಗಾರ ಎಂದು ಕರೆಯುವುದಕ್ಕಾಗುವುದಿಲ್ಲ” ಎಂದರು. ಯಾವುದೇ ಐತಿಹಾಸಿಕ ಘಟನೆಗಳ ಬಗ್ಗೆಯೂ ಇದೇ ಅಂತಿಮ ಮಾಹಿತಿ ಎನ್ನಲು ಬರುವುದಿಲ್ಲ, ಅದು ಕೇವಲ ಮಧ್ಯಂತರ ಮಾಹಿತಿಗಳಾಗಿರುತ್ತವೆ. ಅವುಗಳನ್ನು ಮರುಪ್ರವೇಶ ಮಾಡುವ ಅವಶ್ಯಕತೆ ಇರುತ್ತದೆ. …