ನೇತಾಜಿ ಸುಭಾಶ್ ಚಂದ್ರ ಬೋಸ್ ಬಗ್ಗೆ ಇತಿಹಾಸಕಾರರು ಮತ್ತು ಮೀಡಿಯಾದವರ ಗಮನ ಸೆಳೆಯಲು ಕಷ್ಟವಾಗಿತ್ತು. ಆದರೆ 2005 ರಲ್ಲಿ RTI ಕಾಯ್ದೆ ತಂದ ನಂತರ ತಾನು ಮತ್ತು ತನ್ನ ಸಹೋದ್ಯೋಗಿಗಳು ಸೇರಿ ಗೃಹ ಇಲಾಖೆಗೆ ನೇತಾಜಿ ಕುರಿತ ಮಾಹಿತಿಗಾಗಿ ಅರ್ಜಿ ಸಲ್ಲಿಸಿದಾಗ, ದೇಶದ ಭದ್ರತೆಯ ನೆಪವೊಡ್ಡಿ ಸರ್ಕಾರದವರು ಅರ್ಜಿಯನ್ನು ತಿರಸ್ಕರಿಸಿದ್ದರು. ಕೆಲವು ಕಡತಗಳಲ್ಲಿ ಇರುವ ಸೂಕ್ಷ್ಮ ವಿಷಯಗಳು ಪಶ್ಚಿಮ ಬಂಗಾಳದಲ್ಲಿ ಗಲಭೆ ಕಾರಣವಾಗಬಹುದು ಎಂಬುದು ಕಾರಣವಾಗಿತ್ತು.
ಹಲವು ದಿನಗಳ ಹೋರಾಟದ ನಂತರ 220 ದಾಖಲೆಗಳಲ್ಲಿ ಕೇವಲ 90 ದಾಖಲೆ ಕೊಡಲಾಯಿತು. ಆದರೂ ಸೂಕ್ಷ್ಮ ಎನ್ನುವ ದಾಖಲೆಗಳನ್ನು ತಡೆಯಿಡಿದಿದ್ದರು. ನೇತಾಜಿಯವರ ಕುಟುಂಬದವರ ಮೇಲೆ ಗುಪ್ತಚರ ಇಲಾಖೆಯವರು ಸದಾ ಗಮನವಿಟ್ಟಿದ್ದರು ಮತ್ತು ಈ ಮಾಹಿತಿಯನ್ನು ಬ್ರಿಟಿಷರಿಗೆ ಅಸ್ತಾಂತರಿಸುತ್ತಿದ್ದರು.
1945 ರಂದು ತೈವಾನ್ ನಲ್ಲಿ ನೇತಾಜಿಯವರು ವಿಮಾನ ಅಪಘಾತದಲ್ಲಿ ಸಾಯಲಿಲ್ಲ ಎಂಬ ವರದಿ ಬಂದಿತ್ತು. ನೇತಾಜಿ ರಷ್ಯದಲ್ಲಿರುವ ಬಗ್ಗೆ ಊಹಾಪೋಹಗಳಿದ್ದವು. ಭಾರತ ಮತ್ತು ರಷ್ಯಾದ ನಡುವೆ ಉತ್ತಮ ಸಂಬಂಧವಿದ್ದರೂ ನೆಹರು ಯಾವ ತನಿಕೆಯನ್ನೂ ಮಾಡಿಸಲಿಲ್ಲ. IB ಮತ್ತು RAW ಬಳಿ ಇರುವ ಕಡತಗಳನ್ನ ಹೊರ ತರುವ ತನಕ ಸತ್ಯ ಹೊರಬರುವುದಿಲ್ಲ.
ನೇತಾಜಿಯವರ ಸಾವಿನ ಬಗ್ಗೆ ಅನೇಕ ಊಹಾಪೋಹಗಳಿವೆ,
- ಅವರು 1945 ರಂದು ತೈವಾನ್ ನಲ್ಲಿ ವಿಮಾನ ಅಪಘಾತದಲ್ಲಿ ಸತ್ತರು
- ಅವರನ್ನು ರಷ್ಯದಲ್ಲಿ 1953 ಅಥವ 1954 ರಲ್ಲಿ ಕೊಲ್ಲಲಾಯಿತು
- ಅವರು ಸನ್ಯಾಸಿಯಾಗಿ ಭಾರತದಲ್ಲಿದ್ದರು
“ಇಂಡಿಯನ್ ನ್ಯಾಷನಲ್ ಆರ್ಮಿಯ ಖಜಾನೆಯಲ್ಲಿದ್ದ ಚಿನ್ನ/ಹಣವನ್ನು ಸರ್ಕಾರಿ ಅಧಿಕಾರಿಗಳು ಲೂಟಿ ಮಾಡಿದರು. ನೆಹರು ಆಡಳಿತ ಅವಧಿಯ ನೇತಾಜಿಯ ಕುರಿತ ಕೆಲವು ಕಡತಗಳನ್ನು ಇಂದಿರಾಗಾಂಧಿ ಸಮಯದಲ್ಲಿ ನಾಶಪಡಿಸಲಾಯಿತು. ಈಗಿನ ಸರ್ಕಾರ ನೇತಾಜಿಯ ಕಡತಗಳನ್ನು ಹೊರತರಲು ನಿರ್ಧರಿಸಿರುವುದು ಸ್ವಾಗತಾರ್ಹ. ಮತ್ತು ಕುದ್ದು ಪ್ರಧಾನಿಯವರೇ ರಷ್ಯಗೆ ಡಿಸೆಂಬರ್ ನಲ್ಲಿ ಭೇಟಿ ಕೊಟ್ಟಾಗ ಪುಟಿನ್ ಜೊತೆ ಮಾತನಾಡಿ ರಾಷ್ಯದಲ್ಲಿರುವ ನೇತಾಜಿ ಬಗೆಗಿನ ಕಡತಗಳನ್ನು ಬಿಡುಗಡೆ ಮಾಡಲು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. ನೇತಾಜಿ 1945 ರಂದು ತೈವಾನ್ ನಲ್ಲಿ ವಿಮಾನ ಅಪಘಾತದಲ್ಲಿ ಸತ್ತರು ಎಂಬ ಸುಳ್ಳನ್ನು ಇತಿಹಾಸದಲ್ಲಿ ಹೇಳಿಕೊಂಡು ಬಂದಿರುವುದನ್ನು ಇನ್ನಾದರೂ ನಿಲ್ಲಿಸಬೇಕು” ಎಂದರು.